ವಿರಳ ಭಸ್ಮಧಾತುಗಳು - 
	ಸನ್ನಿಕಟ ಸದೃಶ ರಾಸಾಯನಿಕ ಗುಣಗಳಿರುವ ಲೋಹಿಯ ಧಾತುಗಳ ಗುಂಪು. (ರೇರ್ ಅರ್ತ್ ಎಲಿಮೆಂಟ್ಸ್) ಈ ಧಾತುಗಳು ವಿರಳವೂ (ರೇರ್) ಅಲ್ಲ; ಭಸ್ಮವೂ (ಅರ್ತ್) ಅಲ್ಲ. ಉದಾಹರಣೆಗೆ ಸೀರಿಯಮ್, ಎರ್ಬಿಯಮ್ ಮತ್ತು ಗ್ಯಾಡೊಲಿನಿಯಮ್ಮುಗಳನ್ನು ಹೆಸರಿಸಬಹುದು. ವಿರಳಭಸ್ಮಧಾತುಗಳು ಎಂಬ ಹೆಸರು ರೂಢಿಯಲ್ಲಿ ಬಂದಿರುವ ಅಪಪ್ರಯೋಗ ಮಾತ್ರ. ಪರಮಾಣು ಸಂಖ್ಯೆ 57 ಆಗಿರುವ ಲ್ಯಾಂಥನಮ್ಮಿನಿಂದ ಮುಂದೆ ಪರಮಾಣು ತೂಕ ಕ್ರಮದಲ್ಲಿ ಬರುವ 14 ಧಾತುಗಳೂ ಲ್ಯಾಂಥನಮ್ಮನ್ನು ಅತ್ಯಂತ ನಿಕಟವಾಗಿ ಹೋಲುವುದರಿಂದ, ಆವರ್ತಕೋಷ್ಠಕದ ರಚನೆಯಲ್ಲಿ ಅವನ್ನು ಕ್ರಮವಾಗಿ ಮುಂದಿನ ಸ್ಥಾನಗಳಿಗೆ ಇಡುತ್ತ ಮುಂದುವರಿಯು ವಂತಿರಲಿಲ್ಲ. ಆವರ್ತ ಕೋಷ್ಠಕದ ಜನಕ ಎನಿಸಿರುವ ರಷ್ಯದ ರಸಾಯನ ವಿಜ್ಞಾನಿ ಡಿ. ಐ. ಮೆಂಡಲೀಫ್ (1834-1907) ಧೈರ್ಯವಾಗಿ ಹದಿನೈದು ವಿರಳಭಸ್ಮಧಾತುಗಳನ್ನು ಒಟ್ಟುಗೂಡಿಸಿ ಲ್ಯಾಂಥನಮ್ಮಿನ ಸ್ಥಾನದಲ್ಲಿಟ್ಟು ಆರನೆಯ ಆವರ್ತದ ರಚನೆಯನ್ನು ಮುಂದುವರಿಸಿದ. ಹೀಗಾಗಿ ಈ ಹದಿನೈದು ಧಾತುಗಳಿಗೆ ಲ್ಯಾಂಥನೈಡುಗಳು ಎಂಬ ಹೆಸರೂ ಇದೆ. ಲ್ಯಾಂಥನಮ್ ಅನಂತರದ (ಅಂದರೆ ಪರಮಾಣು ಸಂಖ್ಯೆ 58 ರಿಂದ 71ರ ಪೂರ್ತಿ) ಧಾತುಗಳ ಶ್ರೇಣಿಗೆ ಲ್ಯಾಂಥನಮ್ ಶ್ರೇಣಿ (ಲ್ಯಾಂಥನಮ್ ಸೀರೀಸ್) ಎಂದು ಹೆಸರು. ವಿರಳಭಸ್ಮಧಾತುಗಳನ್ನು ಮೂರು ಉಪಗುಂಪುಗಳಾಗಿ ವಿಂಗಡಿಸಿದೆ. ಸೀರಿಯಮ್ ಲೋಹಗುಂಪು ಒಂದನೆ ಯದು. ಇದರಲ್ಲಿ ಲ್ಯಾಂಥನಮ್, ಸೀರಿಯಮ್, ಪ್ರಾಸಿಯೋಡಿಮಿಯಮ್, ನಿಯೋಡಿಮಿಯಮ್, ಪ್ರೊಮೀಥಿಯಮ್ ಮತ್ತು ಸಮೇರಿಯಮ್‍ಗಳಿವೆ. ಟರ್ಬಿಯಮ್ ಲೋಹಗುಂಪು ಎರಡನೆಯದು. ಇದರಲ್ಲಿ ಯೂರೊಪಿಯಮ್, ಗ್ಯಾಡೊಲಿನಿಯಮ್ ಮತ್ತು ಟರ್ಬಿಯಮ್‍ಗಳಿವೆ. ಮೂರನೆಯ ಉಪಗುಂಪು ಯೆಟ್ರಿಯಮ್ ಲೋಹಗುಂಪಿನಲ್ಲಿ ಡಿಸ್‍ಪ್ರೋಸಿಯಮ್, ಹೋಲ್‍ಮಿಯಮ್, ಎರ್ಬಿಯಮ್, ಥೂಲಿಯಮ್, ಯೆಟ್ರಿಯಮ್, ಇಟರ್ಬಿಯಮ್ ಮತ್ತು ಲ್ಯುಟಿಸಿಯಮ್‍ಗಳಿವೆ. ಇವಕ್ಕೆ ವಿರಳಭಸ್ಮ ಲೋಹಗಳೆಂದು ಹೆಸರು. 

	ಲ್ಯಾಂಥನೈಡ್ ಅಣುಗಳ ಎಲೆಕ್ಟ್ರಾನಿಕ್ ವಿನ್ಯಾಸ. Pಜ4ಜಿ ಟಿ5s25ಠಿ65ಜ1  ಅಥವಾ 6s2. ಇಲ್ಲಿ Pಜ ಎಂದರೆ ಪೆಲೇಡಿಯಮ್‍ನ ಎಲೆಕ್ಟ್ರಾನಿಕ್ ವಿನ್ಯಾಸ 
(1s22s22ಠಿ63s23ಠಿ63ಜ104s24ಠಿ64ಜ10) ಟಿನ ಬೆಲೆ ವಿರಳಭಸ್ಮ ಧಾತುಗಳ ವಿವರಗಳನ್ನು ನೀಡುವ ಪಟ್ಟಿಯಲ್ಲಿ ಇರುವಂತೆ 0 ಲ್ಯಾಂಥನಮ್‍ನಿಂದ 14(ಲ್ಯುಟಿಸಿಯಮ್) ವರೆಗೆ ಇದೆ. ಈ ಪಟ್ಟಿಯಲ್ಲಿ ವಿರಳಭಸ್ಮಧಾತುಗಳ ಬಗ್ಗೆ ಸ್ಥೂಲ ವಿವರಗಳನ್ನು ಮಾತ್ರ ಕೊಟ್ಟಿದೆ. Pಜ5s25ಠಿ6ಎಂಬ ವಿನ್ಯಾಸ ಎಲ್ಲ ಧಾತುಗಳಿಗೂ ಸಾಮಾನ್ಯವಾಗಿರುವುದ ರಿಂದ ಅದನ್ನು ಬಿಟ್ಟಿದೆ.

	ಧಾತುಗಳ ಲಭ್ಯತೆ: ವಿರಳಭಸ್ಮಧಾತುಗಳು ಸತುವು ಮತ್ತು ಸೀಸದಂಥ, ಸಾಮಾನ್ಯ ಬಳಕೆಯಲ್ಲಿರುವ ಕೆಲವು ಲೋಹಗಳಿಗಿಂತಲೂ ಹೇರಳವಾಗಿಯೇ ದೊರಕುತ್ತವೆ. ಬ್ರಜಿಲ್, ಸ್ಕಾಂಡಿನೇವಿಯ, ಭಾರತ ಮತ್ತು ಅಮೆರಿಕ ಸಂಯುಕ್ತಸಂಸ್ಥಾನಗಳು ಮೊದಲಾದ ಪ್ರದೇಶಗಳಲ್ಲಿ ಇವುಗಳ ಖನಿಜಗಳು ದೊರೆಯುತ್ತವೆ. 

	ವಿರಳಭಸ್ಮಧಾತುಗಳು ಎಂಬ ಹೆಸರು ಅವು ದುರ್ಗಮಪ್ರದೇಶಗಳಲ್ಲಿ ಮಾತ್ರ ದೊರೆಯುತ್ತವೆಂಬ ಅರ್ಥದಲ್ಲಿ ಮಾತ್ರ ಇದೆ ಅಷ್ಟೇ. ಸರಿ (ಈವನ್) ಪರಮಾಣುಸಂಖ್ಯೆಯ ವಿರಳಭಸ್ಮಧಾತುಗಳು ಬೆಸ(ಆಡ್) ಪರಮಾಣು ಸಂಖ್ಯೆಯ ಧಾತುಗಳಿಗಿಂತಲೂ ಮತ್ತಷ್ಟು ಹೇರಳವಾಗಿ ಲಭಿಸುತ್ತವೆ. ಇದು ಎಲ್ಲ ಧಾತುಗಳಿಗೂ ಅನ್ವಯಿಸುವ ಸಾಧಾರಣ ನಿರ್ಣಯದ ಅತಿ ಸ್ಪಷ್ಟ ದೃಷ್ಟಾಂತ. ಪ್ರೊಮೀಥಿಯಮ್ಮನ್ನು ಮೊದಲಿಗೆ ಇಲಿನಿಯಮ್ ಎಂದು ಕರೆಯಲಾಗುತ್ತಿತ್ತಲ್ಲದೆ ಅದು ಪ್ರಕೃತಿಯಲ್ಲಿ ದೊರೆಯುತ್ತದೆಂದೂ ಭಾವಿಸಲಾಗಿತ್ತು. ಇದು ಬಲುಬೇಗ ಸಮೇರಿಯಮ್ ಆಗಿ ಮಾರ್ಪಾಡಾಗುವುದರಿಂದ ಪ್ರಕೃತಿಯಲ್ಲಿ ದೊರೆಯುವ ಸಾಧ್ಯತೆ ಇಲ್ಲವೆನ್ನಲಾಗಿದೆ. ಪ್ರೊಮೀಥಿಯಮ್‍ನ್ನು ಕೃತಕವಾಗಿ ನಿಯೋಡಿಮಿಯಮ್ಮಿನ ಮೇಲೆ ನ್ಯೂಟ್ರಾನ್‍ಗಳನ್ನು ತಾಡಿಸುವುದರಿಂದ ಉತ್ಪತ್ತಿಮಾಡುವುದಿದೆ. ಯುರೇನಿಯಮ್-235 ವಿದಳನದಿಂದ ಕೂಡ ಇದು ಲಭ್ಯ. ಪ್ರೊಮೀಥಿಯಮ್ g ಕಿರಣಗಳನ್ನು ಹೊರಗೆಡಹದಿರುವುದರಿಂದಲೂ ಅದರ ಕಿರಣಗಳು ಅಧಿಕ ಶಕ್ತಿಯುಕ್ತವಾಗಿರದಿರುವುದರಿಂದಲೂ ಅದನ್ನು ಸುಲಭವಾಗಿ ಕಾರ್ಯೋದ್ಯುಕ್ತಗೊಳಿಸಿಕೊಳ್ಳಬಹುದು. 

	ಗುಣಲಕ್ಷಣಗಳು : ಈ ಲೋಹಗಳು ಉಜ್ಜ್ವಲ ಹಳದಿಮಿಶ್ರಿತ ಬಿಳಿ ಬಣ್ಣದಿಂದ ಪ್ರಕಾಶಿಸುತ್ತವೆ. ಇವು ವಾಯುವಿನಲ್ಲಿ ಸುಲಭವಾಗಿ ವರ್ತನೆಗೆ ಈಡಾಗುವುದಿಲ್ಲ. ಇವು ಸಾಧಾರಣವಾಗಿ ಟ್ರೈವೇಲೆನ್ಸಿ ಹೊಂದಿರುವಂಥ ಧಾತುಗಳು. ಕೆಲವೊಮ್ಮೆ ಸಮೇರಿಯಮ್, ಯೂರೊಪಿಯಮ್, ಯೆಟರ್ಬಿಯಮ್‍ಗಳು ಬೈವೇಲೆನ್ಸಿ ಗುಣಧರ್ಮವನ್ನೂ ಸೀರಿಯಮ್, ಪ್ರಾಸಿಯೋಡಿಮಿಯಮ್, ಟರ್ಬಿಯಮ್‍ಗಳು ಹೆಚ್ಚಿನ ಟೆಟ್ರವೇಲೆನ್ಸಿಯನ್ನೂ ಪ್ರದರ್ಶಿಸುವುದುಂಟು. ಈ ಹೆಚ್ಚಿನ ವೇಲೆನ್ಸಿಗಳು ಹೆಚ್ಚು ದೃಢವಾದ, ಖಾಲಿ, ಅರ್ಧ ಇಲ್ಲವೆ ಪೂರ್ಣತುಂಬಿದ 4ಜಿ ಶಕ್ತಿಕೋಶಗಳ ರಚನೆಯ ಪ್ರವೃತ್ತಿಯನ್ನು ನಿರೂಪಿಸುತ್ತವೆ. ಈ ಮುಂದೆ ವಿರಲ ಮೃದ್‍ಧಾತುಗಳ ರಾಸಾಯನಿಕ ವೃತ್ತಾಂತ ನಮೂದಿಸಲಾಗಿದೆ. 

	ಸೀರೈಟ್ ಭಸ್ಮಧಾತುಗಳು ಕ್ಷಾರೀಯ ಭಸ್ಮಧಾತುಗಳನ್ನು ಹೋಲುತ್ತವೆ. ಅವನ್ನು ಹೈಡ್ರೊಜನ್ನಿನೊಡನೆ ಕಾಸಿದಾಗ ಘನಹೈಡ್ರೈಡ್‍ಗಳು (ಒಊ3) ದೊರೆಯುತ್ತವೆ. ಅವುಗಳ ಟರ್‍ವೇಲೆಂಟ್ ಆಕ್ಸೈಡುಗಳು ದಹಿಸಿದ ಅನಂತರ ಕೂಡ ಆಮ್ಲಗಳಲ್ಲಿ ಕರಗುತ್ತವೆ. ನೀರಿಗೆ ಹಾಕಿದಾಗ ಅತಿಕಾತುರತೆಯಿಂದ ತಣಿತಗೊಂಡು ಸಾರ ಹೈಡ್ರಾಕ್ಸೈಡ್ ಕ್ಷಾರಗಳನ್ನು ನೀಡುತ್ತವೆ. ವಾಯುವಿನಲ್ಲಿರುವ ಕಾರ್ಬನ್ ಡೈಆಕ್ಸೈಡಿನೊಂದಿಗೆ ವರ್ತಿಸಿ ಕಾರ್ಬೊನೇಟುಗಳನ್ನು ಉಂಟುಮಾಡುತ್ತವೆ. ಇವುಗಳ ಲವಣಗಳು ದ್ರಾವಣದಲ್ಲಿ ಜಲವಿಶ್ಲೇಷಣೆಗೊಳ್ಳುವುದಿಲ್ಲ. ಸೀರಿಯಮ್‍ನ ದೃಢ ಆಕ್ಸೈಡ್, ಅeಔ2  ಆದರೂ ಅದರ ದೃಢಲವಣಗಳು ಟರ್‍ವೇಲೆಂಟ್ ಗುಣಧರ್ಮದವಾಗಿವೆ.  ಅeಔ2 ಸಾರರಿಕ್ತ ಕ್ಷಾರೀಯವಾಗಿದ್ದು ಂಟ2ಔ3 ಯನ್ನು ಹೋಲುತ್ತದೆ. ಐಚಿ2ಔ3  ಅಥವಾ ಅe2ಔ3 ನಂಥ ಸಾರ ಕ್ಷಾರಗಳ ಸಮ್ಮುಖದಲ್ಲಿ ಆಮ್ಲೀಯವಾಗೂ ವರ್ತಿಸುತ್ತದೆ. ಈ ಬಗೆಯ ಆಮ್ಲದ ಲವಣಗಳಿಗೆ ಹೆಚ್ಚಾಗಿ ಕಡುಕಂದುಬಣ್ಣ ಇರುವುದು. ಗ್ಯಾಡೊಲಿನೈಟ್ ಶ್ರೇಣಿಯ ಲೋಹಗಳು, ಅವುಗಳ ಹೈಡ್ರಾಕ್ಸೈಡ್‍ಗಳ ಬಲದಲ್ಲಿ ಕ್ಷಾರೀಯ ಭಸ್ಮಧಾತುಗಳಿಗಿಂತಲೂ ಅಲ್ಯೂಮಿನಿಯಮ್ಮನ್ನು ಹೆಚ್ಚಾಗಿ ಹೋಲುತ್ತವೆ. ಟರ್‍ವೇಲೆಂಟ್ ಆಕ್ಸೈಡುಗಳನ್ನು ಕಾರ್ಬೊನೈಲ್ ಕ್ಲೋರೈಡಿನೊಂದಿಗೆ ಕಾಸಿದಾಗ ಲೋಹಗಳ ಕ್ಲೋರೈಡುಗಳು ದೊರೆಯುತ್ತವೆ. 
ಒ2ಔ3+3ಅoಅಟ2 ಲ 3ಅo2+2ಒಛಿಟ3

	ಈ ಕ್ಲೋರೈಡುಗಳು ಎಥೆನಾಲ್‍ನಲ್ಲಿ ಸಾಧಾರಣ ಮಟ್ಟಿಗೂ ನೀರಿನಲ್ಲಿ ಬಲುಮಟ್ಟಿಗೂ ಕರಗುತ್ತವೆ; ಪ್ರಕ್ಲೇದನ ವಸ್ತುವಾಗಿರುವ ಕಾರಣ ಸುಲಭವಾಗಿ ಆವಿಯಾಗುವುದಿಲ್ಲ. 6-7 ಅಣುಗಳಷ್ಟು ನೀರಿನೊಂದಿಗೆ ಕೂಡಿಕೊಂಡು ಸ್ಫಟಿಕೀಕರಣಗೊಳ್ಳುತ್ತವೆ. ನೈಟ್ರೇಟುಗಳು ನೀರಿನಲ್ಲಿ ಹೆಚ್ಚು ಕರಗಿ, ಮೆಗ್ನೀಷಿಯಮ್ಮಿನೊಂದಿಗೆ ಜೋಡಿ ನೈಟ್ರೇಟ್‍ಗಳನ್ನು ನೀಡುತ್ತವೆ. ಈ ಜೋಡಿ ನೈಟ್ರೇಟುಗಳ ಆಂಶಿಕ ಸ್ಫಟಿಕೀಕರಣದಿಂದ ವಿರಳಭಸ್ಮಧಾತುಗಳನ್ನು ಬೇರ್ಪಡಿಸಬಹುದು. ಸೋಡಿಯಮ್ ಬೈಕಾ ರ್ಬೊನೇಟನ್ನು, ಟರ್‍ವೇಲೆಂಟ್ ಅಯಾನುಗಳುಳ್ಳ ದ್ರಾವಣಗಳಿಗೆ ಬೆರೆಸುವುದರಿಂದ ನಾರ್ಮಲ್ ಕಾರ್ಬೊನೇಟುಗಳನ್ನು ಅವಕ್ಷೇಪಿಸ ಬಹುದು. ಈ ಕಾರ್ಬೊನೇಟುಗಳು ಕ್ಷಾರೀಯ ಕಾರ್ಬೊನೇಟುಗಳ ದ್ರಾವಣಗಳಲ್ಲಿ ಕರಗಿ ಏ2ಅo3.ಒ2 (ಅಔ3)3.3ಊ2ಔ  ಬಗೆಯ ಜೋಡಿ ಲವಣಗಳನ್ನು ನೀಡುತ್ತವೆ. ಉಷ್ಣತೆಯಲ್ಲಿ ಹೆಚ್ಚುವರಿ ಕಂಡುಬಂದಂತೆಲ್ಲ ನೀರಿನಲ್ಲಿ ಧಾತುಗಳ ಸಲ್ಫೇಟುಗಳ ವಿಲೀನತೆ ಕಡಿಮೆಯಾಗುತ್ತದೆ. ಕ್ಷಾರೀಯ ಧಾತುಸಲ್ಫೇಟ್‍ಗಳೊಡನೆ ಕೂಡಿರುವ ಅನೇಕ ಜೋಡಿ ಸಲ್ಫೇಟುಗಳು ಮೊತ್ತದಲ್ಲಿ ಇದ್ದಾಗ್ಯೂ ಭಸ್ಮಧಾತುಗಳು ಪಟಿಕಗಳನ್ನು ಉಂಟುಮಾಡುವುದಿಲ್ಲ.
	
ಉಪಯೋಗಗಳು: ಮಿಷ್‍ಮೆಟಲ್ ಎಂಬುದು ಸೀರಿಯಮ್ ಅನ್ನು ಅಧಿಕವಾಗಿ ಪಡೆದಿರುವ ವಿರಳಭಸ್ಮಧಾತುಗಳ ಮಿಶ್ರಲೋಹ. ಸ್ವಾಭಾವಿಕವಾಗಿ ದೊರೆಯುವ ಲ್ಯಾಂಥನೈಡ್‍ಗಳ ಮಿಶ್ರ ಆಕ್ಸೈಡ್‍ಗಳನ್ನು ಅಪಕರ್ಷಿಸಿ ಇದನ್ನು ತಯಾರಿಸಬಹುದು. ಇದರ ಉತ್ಕರ್ಷಣಉಷ್ಣ ಅಲ್ಯೂಮಿನಿಯಮ್ ದಕ್ಕಿಂತಲೂ ಹೆಚ್ಚಾಗಿರುವುದರಿಂದ ಇದನ್ನು ಗೋಲ್ಡ್‍ಷ್ಮಿಟ್ ಥರ್ಮೈಟ್ ವಿಧಾನದಲ್ಲಿ ಉಪಯೋಗಿಸುವುದಿದೆ. ಈ ಧಾತುಗಳನ್ನು ಉಜ್ಜಿದಾಗ ಬೆಂಕಿಯ ಕಿಡಿಗಳು ಉದ್ಭವಿಸುವುದರಿಂದ ಫ್ಲಿಂಟ್‍ಮಿಶ್ರ ಲೋಹಗಳ ತಯಾರಿಕೆಯಲ್ಲಿ ಇವುಗಳ ಉಪಯೋಗ ಇದೆ. ವಿರಳಭಸ್ಮ ಧಾತುಗಳನ್ನು ನಾನಾ ಬಗೆಯ ಪ್ರಕಾಶೀಯ ಮತ್ತು ಬಣ್ಣದ ಗಾಜುಗಳ ತಯಾರಿಕೆಯಲ್ಲಿ ಬಳಸುತ್ತಾರೆ. ಅವನ್ನು ಗಾಜಿನ ವಿವರ್ಣೀಕರಣದಲ್ಲಿ ಉಪಯೋಗಿಸಿ ಕೊಳ್ಳುವುದಿದೆ. ಗಾಜಿನ ಊದುಕೊಳವೆಗಳು, ಕನ್ನಡಕ ಗಳು, ಆಕಾಶ ಕೆಮರಗಳು ಮುಂತಾದವುಗಳ ತಯಾರಿಕೆಗೆ ಅಗತ್ಯವಾಗುವ ವಿಶಿಷ್ಟ ಗಾಜುಗಳ ಉತ್ಪಾದನೆಯಲ್ಲಿ ವಿರಳಭಸ್ಮಧಾತುಗಳ ಯುಕ್ತ ಮಿಶ್ರಣಗಳನ್ನು ಬಳಸಿಕೊಳ್ಳುತ್ತಾರೆ. ವೈದ್ಯರಲ್ಲಿ ಈ ಧಾತುಗಳ ಲವಣಗಳನ್ನು ಕ್ರಿಮಿನಾಶಕಗಳಾಗಿಯೂ ರಕ್ತ ಹೆಪ್ಪುಗಟ್ಟುವುದನ್ನು ತಡೆಯುವ ವಸ್ತುವಾಗಿಯೂ ಬಳಸಿಕೊಳ್ಳುವುದಿದೆ. ಇವನ್ನು ಅನೇಕ ಮಿಶ್ರಲೋಹಗಳ ತಯಾರಿಕೆಯಲ್ಲಿ ಅದರಲ್ಲೂ ವಿಶಿಷ್ಟ ಉಕ್ಕುಗಳ ತಯಾರಿಕೆಯಲ್ಲಿ ಉಪಯೋಗಿಸುತ್ತಾರೆ.				
		(ಎಮ್.ಎನ್.ಎಸ್.)
   *

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ